ವಿಷಯಕ್ಕೆ ಹೋಗಿ

"ಕ್ಷಿಫಣಿ" ಜಾಲತಾಣದ ಅಧಿಕೃತ ಲಾಂಛನ ಅನಾವರಣ

ನಮ್ಮ "ಕ್ಷಿಫಣಿ" ಜಾಲತಾಣದ ಆಕರ್ಷಕವಾದ ಅಧಿಕೃತ ಲಾಂಛನವು ಜನವರಿ 21, 2026ರ ಬುಧವಾರ ಅನಾವರಣಗೊಂಡಿತು.

ಲಾಂಛನವು ಕನ್ನಡ ಬಾವುಟದಂತೆ ಹಳದಿ-ಕೆಂಪು ಬಣ್ಣಗಳಿಂದ ಕೂಡಿದ ಕ್ಷಿಫಣಿಯನ್ನು ಹೊಂದಿದೆ. ಜಾಲತಾಣದ ಮಾಲೀಕರಾದ ಫಣೀಂದ್ರ ಬೆಂಗಳೂರು ಅವರ ಹೆಸರಿಗೆ ಹೊಂದುವಂತೆ, ಕ್ಷಿಫಣಿ ಹೆಸರಿನಲ್ಲಿ ಉದ್ದೇಶಪೂರ್ವಕವಾಗಿ ಮಹಾಪ್ರಾಣ "ಫ" ಅಕ್ಷರವನ್ನು ಬಳಸಲಾಗಿದೆ. ಮನಸ್ಸಿಗೆ ಮುದ ನೀಡುವಂತೆ ಅತ್ಯಂತ ವರ್ಣಮಯವಾಗಿ ಲಾಂಛನವನ್ನು ವಿನ್ಯಾಸಗೊಳಿಸಲಾಗಿದೆ.

ಹಳದಿ-ಕೆಂಪು ಬಣ್ಣಗಳಿಂದ ಕಂಗೊಳಿಸುತ್ತಿರುವ ಕ್ಷಿಫಣಿ, ಮನಮೋಹಕವಾದ ಮೋಡಗಳು, ನಡುನಡುವೆ ಫಳಫಳ ಹೊಳೆಯುವ ನಕ್ಷತ್ರಗಳು, ಕೆಳಭಾಗದಲ್ಲಿ ಜಾಲತಾಣದ ವಿಳಾಸವನ್ನು ಲಾಂಛನದಲ್ಲಿ ನಾವು ಕಾಣಬಹುದು.