ಫಣೀಂದ್ರ ಬೆಂಗಳೂರು
1. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY)
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯು ಅರ್ಹ ಬಡ ಕುಟುಂಬಗಳಿಗೆ ಆಹಾರ ಧಾನ್ಯವನ್ನು ಉಚಿತವಾಗಿ ಒದಗಿಸುವ ಪ್ರಮುಖ ಆಹಾರ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯಡಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ಬರುವ ಅಂತ್ಯೋದಯ ಅನ್ನ ಯೋಜನೆ (AAY) ಮೂಲಕ ಪ್ರತಿ ಬಡ ಕುಟುಂಬಕ್ಕೆ 35 ಕೆಜಿ ಆಹಾರ ಧಾನ್ಯ ಮತ್ತು ಆದ್ಯತಾ ಕುಟುಂಬಗಳ (PHH) ಸದಸ್ಯರಿಗೆ ತಿಂಗಳಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯ ಉಚಿತವಾಗಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಈ ಉಚಿತ ಆಹಾರ ಧಾನ್ಯ ವಿತರಣೆಯನ್ನು 1 ಜನವರಿ 2024ರಿಂದ ಐದು ವರ್ಷಗಳ ಅವಧಿಗೆ ಮುಂದುವರಿಸಲು ನಿರ್ಧರಿಸಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದ್ದು, ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯೊಂದಿಗೆ ವಿಲೀನಗೊಳಿಸಿ ಉಚಿತ ಆಹಾರ ವಿತರಿಸಲಾಗುತ್ತಿದೆ.
2. ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY)
ಆಯುಷ್ಮಾನ್ ಭಾರತ್ ಯೋಜನೆಯು ಅರ್ಹ ಕುಟುಂಬಗಳಿಗೆ ದೊಡ್ಡ ಪ್ರಮಾಣದ ಆಸ್ಪತ್ರೆ ಚಿಕಿತ್ಸೆಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಆರೋಗ್ಯ ರಕ್ಷಣಾ ಯೋಜನೆ. ಅರ್ಹ ಕುಟುಂಬಕ್ಕೆ ವರ್ಷಕ್ಕೆ ₹5 ಲಕ್ಷದವರೆಗೆ ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆ ಚಿಕಿತ್ಸೆಗೆ ನಗದುರಹಿತ ಆರೋಗ್ಯ ರಕ್ಷಣೆಯನ್ನು ಒದಗಿಸಲಾಗುತ್ತಿದೆ. ಈ ಯೋಜನೆಯ ಪ್ರಮುಖ ಪ್ರಯೋಜನವೆಂದರೆ ಅರ್ಹ ಫಲಾನುಭವಿಗಳು ದೇಶದ ಹಲವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆಯನ್ನು ಪಡೆಯಬಹುದು. ಆಸ್ಪತ್ರೆ ದಾಖಲಾಗುವುದಕ್ಕೂ ಮುನ್ನ ಮಾಡಿದ ಕೆಲವು ವೆಚ್ಚಗಳು ಮತ್ತು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರದ ನಿರ್ದಿಷ್ಟ ಅವಧಿಯ ಕೆಲವು ಚಿಕಿತ್ಸಾ ವೆಚ್ಚಗಳೂ ಕೂಡ ಯೋಜನೆಯ ಪ್ಯಾಕೇಜ್‌ಗಳಲ್ಲಿ ಒಳಗೊಂಡಿರುತ್ತದೆ. ಅರ್ಹ ಕುಟುಂಬಗಳು ಆಯುಷ್ಮಾನ್ ಕಾರ್ಡ್ ಮತ್ತು ಫಲಾನುಭವಿ ವಿವರಗಳನ್ನು ಪರಿಶೀಲಿಸಿಕೊಳ್ಳುವುದು ಬಹಳ ಮುಖ್ಯ. 70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಭಾರತೀಯ ನಾಗರಿಕರಿಗೂ ಈ ಯೋಜನೆಯಡಿ ಆದಾಯದ ಮಿತಿಯಿಲ್ಲದೆ ಅರ್ಹತೆ ನೀಡಲಾಗಿದೆ.
3. ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (VB - G Ram G)
ಈ ಹಿಂದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಎಂದು ಕರೆಯಲಾಗುತ್ತಿದ್ದ ಯೋಜನೆಯ ಹೆಸರನ್ನು ಈಗ “ವಿಬಿ- ಜಿ ರಾಮ್ ಜಿ” ಬದಲಿಸಲಾಗಿದೆ. ಇದು ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಮತ್ತು ಆದಾಯದ ಭದ್ರತೆ ಒದಗಿಸುವ ಪ್ರಮುಖ ಕಾರ್ಯಕ್ರಮವಾಗಿದೆ. ಇದರಡಿ ಗ್ರಾಮೀಣ ಕುಟುಂಬದ ವಯಸ್ಕ ಸದಸ್ಯರು ಕೌಶಲ್ಯರಹಿತ ಉದ್ಯೋಗ ಮಾಡಲು ಸಿದ್ಧರಿದ್ದರೆ, ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 125 ದಿನಗಳ ಖಾತರಿಯ ಕೂಲಿ ಉದ್ಯೋಗ ಪಡೆಯುವ ಹಕ್ಕು ಹೊಂದಿರುತ್ತಾರೆ.
ಈ ಯೋಜನೆಯಡಿ ಉದ್ಯೋಗ ಪಡೆಯಲು ಕುಟುಂಬವು ನೋಂದಾಯಿಸಿಕೊಂಡು ಜಾಬ್ ಕಾರ್ಡ್ ಪಡೆದಿರಬೇಕು. ಈ ಯೋಜನೆಯ ಉದ್ದೇಶ ಕೇವಲ ಕೂಲಿ ನೀಡುವುದಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ, ನೀರಿನ ಮೂಲಗಳ ಸಂರಕ್ಷಣೆ, ಭೂ ಅಭಿವೃದ್ಧಿ ಮತ್ತು ಇತರ ಶಾಶ್ವತ ಆಸ್ತಿಗಳನ್ನು ನಿರ್ಮಿಸುವುದೂ ಕೂಡ ಈ ಯೋಜನೆಯ ಉದ್ದೇಶಗಳು. ಇದು ಗ್ರಾಮೀಣ ಬಡ ಕುಟುಂಬಗಳಿಗೆ ಕೃಷಿಯ ಹೊರತಾಗಿಯೂ ಆದಾಯದ ಅವಕಾಶಗಳನ್ನು ಸೃಷ್ಟಿಸಿ, ಸಂಕಷ್ಟದ ಸಮಯದಲ್ಲಿ ನೆರವಾಗುತ್ತಿದೆ.
ಈ ಯೋಜನೆಯಡಿ ಉದ್ಯೋಗ ಮಾಡಲು ಗ್ರಾಮೀಣ ಕುಟುಂಬವು ಮೊದಲು ತನ್ನ ಗ್ರಾಮ ಪಂಚಾಯಿತಿಯಲ್ಲಿ ಜಾಬ್ ಕಾರ್ಡ್ ನೋಂದಣಿ ಮಾಡಿಸಿಕೊಂಡು ಮತ್ತು ಉದ್ಯೋಗದ ಕುರಿತು ವಿಚಾರಿಸಬೇಕು. ಕೆಲಸ ಕೇಳುವಾಗ ಅಧಿಕೃತ ಪ್ರಕ್ರಿಯೆಯ ಮೂಲಕ ಬೇಡಿಕೆ ಸಲ್ಲಿಸುವುದು ಮತ್ತು ಕೆಲಸದ ದಿನಗಳು ಹಾಗೂ ಪಾವತಿ ವಿವರಗಳನ್ನು ದಾಖಲೆಯಲ್ಲಿ ಪರಿಶೀಲಿಸುವುದು ಉತ್ತಮ. ಕೂಲಿ ಪಾವತಿ ವಿಳಂಬವಾದರೆ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದರೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಥವಾ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.
4. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಉದ್ದೇಶವೇ ಅರ್ಹ ವಸತಿರಹಿತ ಅಥವಾ ದುಃಸ್ಥಿತಿಯ ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳಿರುವ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಳ್ಳಲು ನೆರವಾಗುವುದು. ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗಾಗಿ ಈ ಯೋಜನೆಯು ಪ್ರತ್ಯೇಕವಾಗಿ ಜಾರಿಯಲ್ಲಿದೆ. 2024-25ರಿಂದ 2028-29ರವರೆಗೆ ಈ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಈ ಅವಧಿಯಲ್ಲಿ ಇನ್ನೂ ಎರಡು ಕೋಟಿ ಮನೆಗಳನ್ನು ಒದಗಿಸುವ ಗುರಿ ಹೊಂದಲಾಗಿದೆ.
ಮನೆ ನಿರ್ಮಾಣಕ್ಕೆ ನೆರವು ನೀಡುವುದರ ಜೊತೆಗೆ ಶೌಚಾಲಯ ನಿರ್ಮಾಣಕ್ಕಾಗಿ ₹12,000 ನೆರವು ಕೂಡ ಸಂಬಂಧಿತ ಯೋಜನೆಗಳ ಮೂಲಕ ದೊರೆಯಬಹುದು. ಈ ಯೋಜನೆಯ ಅರ್ಹ ಫಲಾನುಭವಿಗಳನ್ನು ಅರ್ಹ ಕುಟುಂಬಗಳ ಪಟ್ಟಿಗಳು ಮತ್ತು ಸಮೀಕ್ಷೆ/ಪರಿಶೀಲನೆ ಪ್ರಕ್ರಿಯೆಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಯೋಜನೆಯಡಿ ಮನೆ ಕಟ್ಟಿಸಲು ಬಯಸುವವರು ಪಾಲಿಕೆ ಅಥವಾ ಗ್ರಾಮ ಪಂಚಾಯಿತಿಯಲ್ಲಿ ನಿಮ್ಮ ಕುಟುಂಬದ ಹೆಸರು ಅರ್ಹತಾ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ.
5. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY)
ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯು ಬಡ ಕುಟುಂಬಗಳ ಮಹಿಳೆಯರಿಗೆ ಎಲ್‌ಪಿಜಿ ಸಂಪರ್ಕ ಪಡೆಯಲು ಸಹಾಯ ಮಾಡುವ ಯೋಜನೆ. ಪ್ರಸ್ತುತ ಅರ್ಹತೆಯ ಪ್ರಕಾರ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಬಡ ಕುಟುಂಬದ ಮಹಿಳೆಯರು ಯೋಜನೆಯ ಲಾಭ ಪಡೆಯಬಹುದು. ಆ ಕುಟುಂಬಕ್ಕೆ ಈಗಾಗಲೇ ಎಲ್‌ಪಿಜಿ ಸಂಪರ್ಕವಿದ್ದರೆ ಈ ಯೋಜನೆಗೆ ಅರ್ಹರಾಗುವುದಿಲ್ಲ. ಬಡ ಕುಟುಂಬವನ್ನು ಗುರುತಿಸಲು ಸರ್ಕಾರದ ಮಾನದಂಡಗಳನ್ನು ಬಳಸಲಾಗುತ್ತದೆ. ಈ ಯೋಜನೆಯಡಿ ಮೊದಲ ಸಿಲಿಂಡರ್ ಮತ್ತು ಸ್ಟವ್ ಉಚಿತವಾಗಿ ಪಡೆಯಬಹುದು. ನಂತರ ಸಿಲಿಂಡರ್‌ಗಳು ರಿಯಾಯಿತಿ ದರದಲ್ಲಿ ದೊರೆಯುತ್ತದೆ.
6. ಪ್ರಧಾನ ಮಂತ್ರಿ ಜನಧನ ಯೋಜನೆ (PMJDY)
ಬ್ಯಾಂಕಿಂಗ್ ಸೌಲಭ್ಯದಿಂದ ಹೊರಗಿದ್ದ ಜನರನ್ನು ಅಧಿಕೃತ ಹಣಕಾಸು ವ್ಯವಸ್ಥೆಯೊಳಗೆ ತರುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಧಾನ ಮಂತ್ರಿ ಜನಧನ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿ, ಅರ್ಹ ವ್ಯಕ್ತಿಯು ಉಳಿತಾಯ ಬ್ಯಾಂಕ್ ಖಾತೆಯನ್ನು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ನಿಯಮವಿಲ್ಲದೇ ತೆರೆಯಬಹುದು. ಈ ಖಾತೆಯ ಮೂಲಕ ಉಳಿತಾಯ, ಹಣ ವರ್ಗಾವಣೆ, ವಿಮೆ, ಪಿಂಚಣಿ ಮತ್ತು ಡಿಬಿಟ್ ಮುಂತಾದ ಸೌಲಭ್ಯಗಳನ್ನು ಪಡೆಯಬಹುದು. ಜನಧನ ಖಾತೆ ಹೊಂದಿರುವವಿಗೆ ರೂಪೆ ಡೆಬಿಟ್ ಕಾರ್ಡ್ ಮತ್ತು ಓವರ್ ಡ್ರಾಫ್ಟ್ ಸೌಲಭ್ಯ ಕೂಡ ಲಭ್ಯವಿದೆ.
7. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM)
ಇದು ಅಸಂಘಟಿತ ವಲಯದ ಬಡ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಪಿಂಚಣಿ ಭದ್ರತೆ ಒದಗಿಸುವ ಪಿಂಚಣಿ ಯೋಜನೆ. 18ರಿಂದ 40 ವರ್ಷ ವಯಸ್ಸಿನ ಮತ್ತು ತಿಂಗಳಿಗೆ ₹15,000ಕ್ಕಿಂತ ಕಡಿಮೆ ಆದಾಯ ಹೊಂದಿರುವ ಅಸಂಘಟಿತ ಕಾರ್ಮಿಕರು ಈ ಯೋಜನೆಗೆ ಅರ್ಹರು. EPFO, ESIC ಅಥವಾ NPS ಮತ್ತಿತರ ನಿರ್ದಿಷ್ಟ ಸಾಮಾಜಿಕ ಭದ್ರತಾ ಯೋಜನೆಗಳ ಸದಸ್ಯರಾಗಿರುವವರು ಮತ್ತು ಆದಾಯ ತೆರಿಗೆ ಪಾವತಿದಾರರು ಈ ಯೋಜನೆಗೆ ಅರ್ಹರಲ್ಲ.
ಅರ್ಹ ಸದಸ್ಯರು ತಮ್ಮ ವಯಸ್ಸಿಗೆ ಅನುಗುಣವಾಗಿ ನಿಗದಿತ ಮೊತ್ತವನ್ನು ಪಾವತಿಸಿದರೆ, ಕೇಂದ್ರ ಸರ್ಕಾರವೂ ನಿಯಮಾನುಸಾರ ಸಮಾನ ಮೊತ್ತವನ್ನು ಪಾವತಿಸುತ್ತದೆ. ಸದಸ್ಯರು 60 ವರ್ಷ ವಯಸ್ಸನ್ನು ತಲುಪಿದ ನಂತರ ತಿಂಗಳಿಗೆ ಕನಿಷ್ಠ ₹3,000 ಪಿಂಚಣಿ ಸಿಗಲಿದೆ. ಸದಸ್ಯರು ಸಾವನ್ನಪ್ಪಿದ ಸಂದರ್ಭದಲ್ಲಿ ಅವರ ಪಿಂಚಣಿ ಪ್ರಯೋಜನಗಳನ್ನು ಸಂಗಾತಿಗೆ ಸಿಗುವಂತೆ ಮಾಡುವ ವ್ಯವಸ್ಥೆಯೂ ಲಭ್ಯವಿದೆ.
8. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)
ಇದು ಅಪಘಾತದಿಂದ ಉಂಟಾಗುವ ಮರಣ ಮತ್ತು ಅಂಗವೈಕಲ್ಯಕ್ಕೆ ಕಡಿಮೆ ಪ್ರೀಮಿಯಂನಲ್ಲಿ ವಿಮಾ ರಕ್ಷಣೆ ನೀಡುವ ಅಪಘಾತ ವಿಮಾ ಯೋಜನೆ. 18ರಿಂದ 70 ವರ್ಷ ವಯಸ್ಸಿನ ಅರ್ಹ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆದಾರರು ಯೋಜನೆಗೆ ಸೇರಬಹುದು. ಪ್ರಸ್ತುತ ವಾರ್ಷಿಕ ಪ್ರೀಮಿಯಂ ₹20 ಆಗಿದ್ದು, ಅಪಘಾತದಿಂದ ಮರಣ ಅಥವಾ ಶಾಶ್ವತವಾದ ಸಂಪೂರ್ಣ ಅಂಗವೈಕಲ್ಯಕ್ಕೆ 2 ಲಕ್ಷ ರೂ. ಮತ್ತು ಶಾಶ್ವತವಾದ ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂಪಾಯಿವರೆಗೆ ಪರಿಹಾರ ದೊರೆಯಲಿದೆ.
ಇದರ ಪ್ರೀಮಿಯಂ ಮೊತ್ತವು ಸಾಮಾನ್ಯವಾಗಿ ಖಾತೆಯಿಂದಲೇ ಆಟೋ-ಡೆಬಿಟ್ ಆಗುವುದರಿಂದ ಖಾತೆಯಲ್ಲಿ ಅಗತ್ಯ ಹಣ ಇರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದರೂ, ಈ ಯೋಜನೆಯಡಿ ಒಂದು ಖಾತೆಯ ಮೂಲಕ ಮಾತ್ರ ಫಲಾನುಭವ ಪಡೆಯಲು ಅವಕಾಶವಿದೆ. ಅಪಘಾತ ಸಂಭವಿಸಿದರೆ ಕುಟುಂಬದವರು ಯೋಜನೆಯ ನಿಯಮಗಳಿಗೆ ಅನುಗುಣವಾಗಿ ಕ್ಲೈಮ್ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಿ, ಅರ್ಹವಾಗಿರುವಷ್ಟು ಪರಿಹಾರ ಪಡೆಯಬಹುದು.
ಭಾರತದ ಕೇಂದ್ರ ಸರ್ಕಾರವು ಬಡ ಹಾಗೂ ಮಧ್ಯಮ ವರ್ಗಗಳ ಜನರಿಗಾಗಿ ಹಲವು ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಡಿ ಆಹಾರ, ಆರೋಗ್ಯ, ಉದ್ಯೋಗ, ಮನೆ, ಅಡುಗೆ ಅನಿಲ, ಬ್ಯಾಂಕಿಂಗ್, ವಿಮೆ ಮತ್ತು ವೃದ್ಧಾಪ್ಯ ಪಿಂಚಣಿ ಮತ್ತಿತರ ಹತ್ತುಹಲವು ಅಗತ್ಯ ಸೌಲಭ್ಯಗಳು ಬಡವರಿಗೆ ದೊರೆಯುತ್ತಿವೆ. ಮಾಹಿತಿಯ ಕೊರತೆಯಿಂದ ಅನೇಕ ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಯೋಜನೆಯ ವಿವರವನ್ನು ತಲುಪಿಸಿ, ಪ್ರತಿಯೊಂದು ಅರ್ಹ ಕುಟುಂಬಕ್ಕೂ ಸೂಕ್ತ ಸೌಲಭ್ಯಗಳು ದೊರೆಯುವಂತೆ ಮಾಡುವುದು ನಮ್ಮ ಸಂಕಲ್ಪ.